ಜ್ಯಾಕ್ಯಾನಿಯ -
ಮಿರ್ಸಿನೇಸೀ ಕುಟುಂಬಕ್ಕೆ ಸೇರಿದ ಅಲಂಕಾರಸಸ್ಯ. ಇದರಲ್ಲಿ ಪೊದೆ ಇಲ್ಲವೆ ವೃಕ್ಷಗಳಾಗಿ ಬೆಳೆಯುವ 33 ಪ್ರಭೇದಗಳಿವೆ. ಇದು ವೆಸ್ಟ್ ಇಂಡೀಸಿನ ಮೂಲವಾಸಿ. ಅಮೆರಿಕದ ಉಷ್ಣ ಪ್ರದೇಶಗಳಲ್ಲಿ ಇದನ್ನು ಅಲಂಕಾರ ಗಿಡವಾಗಿ ಬೆಳೆಸುತ್ತಿದ್ದಾರೆ. ಎಲೆಗಳು ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಯ ಅಂಚು ನಯವಾಗಿದೆ. ಹೂಗಳು ಬಿಳಿ, ಊದಾ ಅಥವಾ ಕಿತ್ತಲೆ ಬಣ್ಣದವು. ಹೂಗಳು ಒಂಟಿಯಾಗಿ ಅಥವಾ ಛತ್ರಮಂಜರಿಗಳಲ್ಲಿ ಅರಳುತ್ತವೆ. ಪುಷ್ಪದಳಗಳು 5. ಹಣ್ಣಿನ ಹೊರಸಿಪ್ಪೆ ಚರ್ಮಿಲ ರೀತಿಯದು. ಹಣ್ಣಿನ ಒಳಭಾಗದಲ್ಲಿ ಮೃದು ತಿರುಳು ಮತ್ತು ಅಸಂಖ್ಯ ಬೀಜಗಳುಂಟು.
(ಎಂ.ಎಚ್.ಎಂ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ